ಶ್ರೀ ವರಮಾಹಾಲಕ್ಷ್ಮೀ ನಮಃ.._/\_..
ಎಲ್ಲರೂ ತರಾತುರಿಯಿಂದ ವರಮಹಾಲಕ್ಷ್ಮಿ ಹಬ್ಬದ ತಯಾರಿ ಮಾಡ್ತಾ ಇದ್ದೀರಿ ಅಲ್ವಾ..
ಸರಿ ಮತ್ತೆ . ನಾನು ಇವತ್ತು ಮಾಡಿದ ‘ಮಸಾಲಾ ಅಡಿಕೆ” ಬಗ್ಗೆ ನಿಮಗೆ ಹೇಳ್ತೀನಿ.
ತಾಯಿಯ ಪೂಜೆ ಆದ ಬಳಿಕ ಬಂದ ಮುತೈದೆಯರಿಗೆ ಅರಿಷಿಣ- ಕುಂಕುಮದ ಜೊತೆಗೆ ವೀಳೆದೆಲೆ ಕೊಡುವ ಪದ್ಧತಿ ಎಲ್ಲರ ಮನೆಯಲ್ಲೂ ಇರುತ್ತೆ. ದೆಹಲಿಯಲ್ಲಿ ಸಿಗೋ ವೀಳ್ಯದೆಲೆಯನ್ನೇ ನಾನು ಪಾನ್ ಅಥವಾ ಬೀಡಾ ಕಟ್ಟಿ ಕೊಡೋ ಪದ್ಧತಿಯನ್ನ ಇಟ್ಟುಕೊಂಡಿದ್ದೀನಿ.
ಘಮಘಮಿಸುವ

ಮಸಾಲಾ ಅಡಿಕೆ
ಬೇಕಾಗುವ ಸಾಮಗ್ರಿಗಳು
ಚಿಕಣಿ ಅಡಿಕೆ ಪುಡಿ- 1/2 ಕೆಜಿ
ಏಲಕ್ಕಿ ಪುಡಿ -1/2 ಚಹಾ ಚಮಚ
ಲವಂಗ- 1/2 ಚಹಾ ಚಮಚ
ಜೇಷ್ಠಮಧ್ ಪುಡಿ – 4 ಚಮಚ- ( ಗಂಟಲಿಗೆ ತುಂಬಾ ಒಳ್ಳೇದು)
ತುಪ್ಪ- 2 ಚಮಚ (ತುಪ್ಪದ ಗಸಿಯನ್ನೂ ಸಹ ಬಳಸಬಹುದು )
ಕೊತ್ತಂಬರಿ ಬೀಜ- 4 ಚಮಚ
ಬಡೇಸೊಪು- 8 ಚಮಚ
ಒಣ ಕೊಬ್ಬರಿ ತುರಿ- 1/2 ಕಪ್
ಚಮನ್ ಬಹಾರ್ ( ಪಾನ್ ಮಸಾಲಾ) – 1 ಚಮಚ
ಜಾಜಿ ಕಾಯಿ ಪುಡಿ- ¼ ಚಹಾ ಚಮಚ
ಪಚ್ಚಕರ್ಪುರ- ¼ ಚಹಾ ಚಮಚ
ಸಕ್ಕರೆ- 2 ಚಮಚ

ವಿಧಾನ
ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದೊಡನೆ ಅದರಲ್ಲಿ ಅಡಿಕೆ ಪುಡಿಯನ್ನು ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ.
ಒಲೆಯ ಮೇಲಿಂದ ಕೆಳಗಿಳಿಸಿ ಉಳಿದೆಲ್ಲಾ ಸಾಮಾನುಗಳನ್ನ ಹಾಕಿ (ಕೊಬ್ಬರಿ ತುರಿಯನ್ನು ಬಿಟ್ಟು) ಚೆನ್ನಾಗಿ ಕಲಿಸಿ.
ಬೇಕೂಂದ್ರೆ ಒಂದು ಬಾರಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ.
ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.
ಘಮಘಮಿಸುವ ಮಸಾಲಾ ಅಡಿಕೆ ತಯಾರ್..
ಇದನ್ನು ಹಾಗೇ ಊಟದ ಬಳಿಕ ಸೇವಿಸಬಹುದು ,
ಸುಣ್ಣ ಹಚ್ಚಿದ ವೀಳ್ಯದೆಲೆಯಲ್ಲಿ ಸುಂದರವಾದ ಬೀಡಾ ಕಟ್ಟಿ ಮುತೈದೆಯರಿಗೆ ನೀಡಿ.
ಎಲ್ಲಕ್ಕೂ ಶ್ರೇಷ್ಠವಾದ ದಾನ- ವೀಳ್ಯದೆಲೆಯ ದಾನ ಅಂತ ನಮ್ಮಮ್ಮಾ ಹೇಳ್ತಿದ್ರು.
ವರಮಹಾಲಕ್ಷ್ಮಿಯ ಪೂಜೆಯ ಫಲವನ್ನು ಪಡೆಯಿರಿ._/\_.